ಚೆಕ್ ಪೋಸ್ಟ್‍ಗಳಿಗೆ ಎಸ್‍ಪಿ ಡಾ.ಸುಮನ್ ಭೇಟಿ

13/05/2020

ಮಡಿಕೇರಿ ಮೇ 13 : ಶನಿವರಸಂತೆ, ಕೊಡ್ಲಿಪೇಟೆಯ ಗಡಿ ಭಾಗವಾದ ನಿಲುವಾಗಿಲು, ಹಿಪ್ಲಿ, ಶಾಂತಪುರ ಚೆಕ್ ಪೋಸ್ಟ್‍ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೊರೋನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಅಂತರವನ್ನು ಕಾಯ್ದುಕೊಳ್ಳಬೇಕು. ಹೊರ ರಾಜ್ಯ, ಜಿಲ್ಲೆಯಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.