ಕಾಡಾನೆಗಳು ಪ್ರತ್ಯಕ್ಷ : ಕಣಿವೆ ಗ್ರಾಮಸ್ಥರಲ್ಲಿ ಆತಂಕ

13/05/2020

ಮಡಿಕೇರಿ ಮೇ 13 : ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಾಡಾನೆಗಳು ಹುದುಗೂರು ಭಾಗದಿಂದ ಹಾರಂಗಿ ನಾಲೆ ರಸ್ತೆಯಲ್ಲಿ ಬಂದಿದ್ದು, ಬರುವ ದಾರಿಯಲ್ಲಿ ಅನೇಕ ರೈತರ ಬೆಳೆಯನ್ನು ನಾಶ ಮಾಡಿವೆ. ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಆನೆಗಳನ್ನು ಜೇನುಕಲ್ಲು ಬೆಟ್ಟದತ್ತ ಓಡಿಸುವ ಕಾರ್ಯಾಚರಣೆ ನಡೆಸಿತು.
ಈ ಸಂದರ್ಭ ಹೆಬ್ಬಾಲೆ ಉಪವಲಯ ಅರಣ್ಯಾಧಿಕಾರಿ ಭರತ್, ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.