ನಕಲಿ ಟ್ವೀಟರ್ ಗಳ ಬಗ್ಗೆ ಎಚ್ಚರ

14/05/2020

ನವದೆಹಲಿ ಮೇ 13 : ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ಕುರಿತು ನಕಲಿ ಟ್ವೀಟರ್ ಗಳ ಬಗ್ಗೆ ಜನರು ಎಚ್ಚರವಾಗಿರಬೇಕೆಂದು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಸಲಹೆ ನೀಡಿದೆ.
ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಲಡಾಖ್ ಕುರಿತು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿನಿಮಯವಾಗಿರುವ ಮಾಹಿತಿ ಅಧಿಕೃತವಲ್ಲ ಎಂದು ಗೃಹ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಗಿಲ್ಗಿಟ್-ಬಾಲಿಸ್ತಾನ್ ಕುರಿತು ಇತ್ತೀಚಿಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಟ್ವಿಟರ್ ಖಾತೆಯನ್ನು ದೃಢೀಕರಿಸಲಾಗಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. 31,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈ ಖಾತೆ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಅಧಿಕೃತ ಟ್ವಿಟರ್ ಖಾತೆಯಲ್ಲ ಎಂದು ಟ್ವೀಟ್ ಮಾಡಿದೆ. ಕೇಂದ್ರ ಭೂ ಭಾಗ ಸೇರಿದ ಲಡಾಖ್‍ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆIPಖ_ಐeh ಮತ್ತು Iಟಿಜಿoಡಿmಚಿಣioಟಿಆeಠಿ4 ಎರಡು ಖಾತೆಗಳು ಮಾತ್ರ ಅಧಿಕೃತ ಎಂದು ತಿಳಿಸಿದೆ.