ಹಾಸ್ಯ ನಟ ಮೈಕೆಲ್ ಮಧು ನಿಧನ

14/05/2020

ಸ್ಯಾಂಡಲ್​ವುಡ್​ನ ಹಾಸ್ಯ ನಟ ಮೈಕೆಲ್​ ಮಧು ಇಹಲೋಕ ತ್ಯಜಿಸಿದ್ದಾರೆ.  ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಂಜೆ ನಾಲ್ಕರ ವೇಳೆಗೆ ಕೊನೆ ಉಸಿರೆಳೆದಿದ್ದಾರೆ.

50 ವರ್ಷದ ಕನ್ನಡದ ಹಾಸ್ಯ ನಟ ಮೈಕೆಲ್​ ಮಧು ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿರುವ ನಟ ಸುಮಾರು 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಓಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಎಕೆ 47, ಸೂರ್ಯವಂಶ, ಯಜಮಾನ ಹಾಗೂ ಇತರೆ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿದ್ದಾರೆ.