ಗಾಳಿಬೀಡು ಯುವಕ ನಾಪತ್ತೆ

14/05/2020

ಮಡಿಕೇರಿ ಮೇ 14 : ಗಾಳಿಬೀಡಿನ ಎ.ಡಿ.ಜನಾರ್ಧನ್ ಎಂಬುವವರ ಪುತ್ರ ಎ.ಜೆ.ರಾಕೇಶ್ (ಸೋನು-24) ಮೇ 4 ರಿಂದ ನಾಪತ್ತೆಯಾಗಿರುವುದಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 4 ರಂದು ಸಂಜೆ 5.15ಕ್ಕೆ ಗಾಳಿಬೀಡಿನ ಮನೆಯಿಂದ ಮಡಿಕೇರಿ ಕಡೆಗೆ ಹೋದ ರಾಕೇಶ್ ಇಲ್ಲಿಯವರೆಗೂ ಮನೆಗೆ ವಾಪಾಸ್ಸು ಬಂದಿಲ್ಲ. ಮನೆಯಿಂದ ಹೊರಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಜಾಕೆಟ್ ಮತ್ತು ಟೋಪಿ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಮಾತನಾಡಬಲ್ಲ ಈ ಯುವಕ ಎಲ್ಲಿಯಾದರು ಕಂಡು ಬಂದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಮೊ.ಸಂ. 8184814340, 8105839635.