ನೌಕರರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ

15/05/2020

ನವದೆಹಲಿ ಮೇ 14 : ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವಂತಾಗಿದೆ. ಇನ್ನು ಕೊರೋನಾ ನಂತರವೂ ಕೇಂದ್ರ ಸರ್ಕಾರ ತನ್ನ ನೌಕರಿಗಾಗಿ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ.
ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಈ ವ್ಯವಸ್ಥೆಯನ್ನ ತರಲು ಚಿಂತಿಸಲಾಗಿದ್ದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ(ಡಿಎಆರ್ಪಿಜಿ) ಈ ಬಗ್ಗೆ ಕರಡು ರೂಪಿಸಿದೆ.
ಇನ್ನು ಮನೆಯಲ್ಲಿಯೇ ಕುಳಿತು ಸರ್ಕಾರಿ ಕಡತಗಳನ್ನು ಬಳಸುವಾಗ ಅಲ್ಲಿ ಮಾಹಿತಿಯ ಸುರಕ್ಷೆ ಮತ್ತು ಗೌಪ್ಯತೆ ಬಗ್ಗೆ ಗಮನಹರಿಸಬೇಕಿದೆ. ಲಾಕ್ ಡೌನ್ ಮುಗಿದ ನಂತರವೂ ಇದೇ ರೀತಿಯ ವ್ಯವಸ್ಥೆ ಮುಂದುವರಿಸಿ ಹೋಗುವ ಅಗತ್ಯವಿದೆ ಎಂದು ಡಿಎಆರ್ಪಿಜಿ ಹೇಳಿದೆ.
ಈ ಕರಡುಗಳಿಗೆ ಮೇ 21ರೊಳಗೆ ಪ್ರತಿಕ್ರಿಯಿಸುವಂತೆ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಹೇಳಲಾಗಿದೆ.