ಕೆಬಿಸಿ ಸೀಸನ್ 12ಕ್ಕೆ ಡಿಜಿಟಲ್ ಚಾಲನೆ

15/05/2020

ಕೊರೊನಾ ಭಯದಿಂದಾಗಿ ನಿಂತುಹೋಗಿದ್ದ ಚಟುವಟಿಕೆಗಳು ಇದೀಗ ತಂತ್ರಜ್ಞಾನದ ನೆರವಿನಿಂದ ಮತ್ತೆ ಆರಂಭಗೊಳ್ಳುತ್ತಿವೆ. ಮೇರುನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ ಸೀಸನ್ 12 ಕ್ಕೆ ಡಿಜಿಟಲ್ ಪ್ರೋಮೋ ಸಿದ್ಧವಾಗಿದ್ದು, ಈ ಮೂಲಕ ಇನ್ನೂಹಲವು ಪ್ರಕ್ರಿಯೆಗಳನ್ನು ಮುಂದುವರಿಸಲು ಕೆಬಿಸಿ ತಂಡ ತಯಾರಾಗಿದೆ.
ಕೆಬಿಸಿ ಸೀಸನ್ 12ರ ಪ್ರೋಮೊ ಶೂಟಿಂಗ್ ಅನ್ನು ಆನ್‍ಲೈನ್‍ನಲ್ಲಿಯೇ ಮಾಡಲಾಗಿದೆ. ಇತ್ತೀಚಿಗೆ ಇದರ ರಿಜಿಸ್ಟ್ರೇಷನ್ ಪ್ರಕ್ರಿಯನ್ನೂ ಆನ್ ಲೈನ್‍ನಲಲೇ ಆರಂಭಿಸಲಾಗಿದ್ದು, ಇದೀಗ ಪ್ರೋಮೊಗಳ ಶೂಟಿಂಗನ್ನೂ ಡಿಜಿಟಲ್ ಮಯಗೊಳಿಸಲಾಗಿದೆ.