ಅನುದಾನ ವಾಪಾಸ್ಸಾಗುತ್ತಿದೆ : ಜಿ.ಪಂ ಸದಸ್ಯೆ ಚಂದ್ರಕಲಾ ಅಸಮಾಧಾನ

May 15, 2020

ಮಡಿಕೇರಿ ಮೇ 15 : ಜಿಲ್ಲೆಯ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನ ಖರ್ಚಾಗದೆ ಸಕಾರಕ್ಕೆ ವಾಪಾಸ್ಸಾಗುತ್ತಿದೆ ಎಂದು ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರಪೇಟೆ ತಾಲ್ಲೂಕಿನಲ್ಲೇ ಸುಮಾರು 80 ಲಕ್ಷ ರೂ.ಗಳಷ್ಟು ಹಣ ಸರ್ಕಾರಕ್ಕೆ ಮರಳಿದೆ. ಸಕಾಲದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಇರುವುದೇ ಹಣ ಮರಳಲು ಕಾರಣವೆಂದು ಟೀಕಿಸಿದ್ದಾರೆ.

error: Content is protected !!