ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 73 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ದಿ : ಸಂಸದ ಪ್ರತಾಪ್ ಸಿಂಹ ಮಾಹಿತಿ  

15/05/2020

ಮಡಿಕೇರಿ ಮೇ 15 :  ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಯ 13 ಗ್ರಾಮೀಣ ರಸ್ತೆಗಳನ್ನು ಅಂದಾಜು ರೂ. 73 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವಋತು ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಂಸದ  ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

ಗ್ರಾಮ ಸಡಕ್ ಯೋಜನೆ ಹಂತ 3ರ ಬ್ಯಾಚ್ 1 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 60:40 ಅನುಪಾತದಲ್ಲಿ ಒಟ್ಟು 78.528 ಕೀ. ಮೀ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯಲಾಗಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ತಾಲ್ಲೂಕಿನ ಬಲಮುರಿಯಿಂದ ಹೊದವಾಡ ಶಾಲೆ ವಯಾ ವಾಟೆಕಾಡು, ಹೊದ್ದೂರು 5.59 ಕಿ. ಮೀ ರಸ್ತೆ, ಬೆಂಗೂರಿನಿಂದ ಕೋಪಟ್ಟಿ 7.89 ಕಿ. ಮೀ ರಸ್ತೆ, ಬಾವಲಿಯಿಂದ ಎಸ್. ಹೆಚ್ (ನರಿಯಂದಡ) 5.61 ಕಿ. ಮೀ ರಸ್ತೆ ಅಭಿವೃದ್ದಿಪಡಿಸಲಾಗುವುದು, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನದಿಂದ ನಾಕೂರು(ವಯಾ ಕಾನ್ ಬೈಲು ಬೈಚನಹಳ್ಳಿ, ನಾಕೂರು ಶಿರಂಗಾಲ) 6.64 ಕಿ. ಮೀ ರಸ್ತೆ, ಅಂದಗೋವೆಯಿಂದ ಕಂಬಿಬಾಣೆ(ವಯಾ ಮೇಟ್ನಹಳ್ಳ ) 6.38 ಕಿ. ಮೀ ರಸ್ತೆ, 1ನೇ ಕೂಡ್ಲುರಿನಿಂದ ಹಂಡ್ಲಿ 5.90 ಕಿ. ಮೀ ರಸ್ತೆ, ಸುಂಟಿಯಿಂದ ಗೋಂದಲ್ಲಿ(ವಯಾ ಬಸವನಕೊಪ್ಪ, ಶಾಂತವೇರಿ, ಗೋಂದಳ್ಳಿ ) 5.282 ಕಿ. ಮೀ ರಸ್ತೆ, ಕರ್ಕಳ್ಳಿಯಿಂದ ಕುಶಾಲನಗರ ಎಸ್. ಹೆಚ್ 5.99 ಕಿ. ಮೀ ರಸ್ತೆ, ವಿರಾಜಪೇಟೆ ತಾಲ್ಲೂಕಿನ ಹುದಿಕೇರಿಯಿಂದ ಬೆಟ್ಟಚುಕ್ಕಿ(ವಯಾ ಬೆಳ್ಳೂರು) 5.92 ಕಿ. ಮೀ ರಸ್ತೆ, ಕೆ. ಎಂ. ಕೊಲ್ಲಿಯಿಂದ ಕುಮಟೂರು(ವಯಾ ಕೆ.ಬಾಡಗ, ಕಲ್ಲಂಬಲ) 6.73 ಕಿ. ಮೀ ರಸ್ತೆ, ಸಿ. ಹೆಚ್. ದೇವಸ್ಥಾನದಿಂದ ಬಲಪನಕೆರೆ(ವಯಾ ಹಲ್ಲಿಗಟ್ಟು, ಸೀತಾ ಕಾಲೋನಿ, ಚೀನಿವಾಡ, ಬೇಗೂರು) 7.70 ಕಿ. ಮೀ, ನಾಂಗಾಲದಿಂದ ಬಿಟ್ಟಂಗಾಲ-ಕೊಂಗಾನ ರಸ್ತೆ(ವಯಾ ಕೊತೇರಿ, ಪೊದಕೇರಿ, ವಿ. ಬಾಡಗ, ಕುಟ್ಟಂದಿ) 8.90 ಕಿ. ಮೀ ರಸ್ತೆಗಳಿಗೆ ಟೆಂಡರ್ ಕರೆಯಲಾಗಿದೆ ಎಂದು .ಪ್ರತಾಪ್ ಸಿಂಹ ವಿವರಿಸಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ 3 ರ ಬ್ಯಾಚ್-2 ಕಾಮಗಾರಿಯಾದ ಮಡಿಕೇರಿ ತಾಲ್ಲೂಕಿನ ಬಲಮುರಿಯಿಂದ ಕೊಣಜಗೇರಿ ವಯಾ ನಿಬ್ಬುಗೇರಿ 5.31 ಕಿ.ಮೀ ರಸ್ತೆ ಕಾಮಗಾರಿಗೆ ಅಂದಾಜು 4.14 ಕೋಟಿಗಳಿಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.