10 ರೂ. ನಾಣ್ಯ ಪಡೆಯಲು ಕೊಡಗು ಚೇಂಬರ್ ಆಫ್ ಕಾಮರ್ಸ್ ಮನವಿ

May 15, 2020

ಮಡಿಕೇರಿ ಮೇ 15 : ಆರ್‍ಬಿಐ ಸೂಚನೆಯಂತೆ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಲ್ಲಿದ್ದು, ಗ್ರಾಹಕರು ಹಾಗೂ ವರ್ತಕರು ನಾಣ್ಯಗಳನ್ನು ನಿರಾತಂಕವಾಗಿ ಪಡೆಯಬಹುದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹತ್ತು ರೂ. ನಾಣ್ಯದ ಬಗ್ಗೆ ಹಬ್ಬಿರುವ ಊಹಾಪೋಹಗಳಿಗೆ ಕಿವಿಗೊಡದೆ ನಾಣ್ಯಗಳನ್ನು ವ್ಯವಹಾರದಲ್ಲಿ ಬಳಸಬಹುದಾಗಿದೆ ಎಂದು ಹೇಳಿದ್ದಾರೆ. ಬ್ಯಾಂಕ್ ಗಳಿಗೆ ಹತ್ತು ರೂಪಾಯಿಯ ನೋಟುಗಳು ಬರುವುದು ಸ್ಥಗಿತಗೊಂಡಿದೆ. ಚಿಲ್ಲರೆಗಾಗಿ ಹತ್ತು ರೂಪಾಯಿಯ ನೋಟುಗÀಳನ್ನು ಪಡೆಯಲು ಬ್ಯಾಂಕ್ ಗಳಿಗೆ ವರ್ತಕರು ತೆರಳಿದಾಗ ಈ ಮಾಹಿತಿ ತಿಳಿದು ಬಂದಿದೆ.
ಅಲ್ಲದೆ ಹತ್ತು ರೂ. ನಾಣ್ಯಗಳನ್ನು ಚಲಾವಣೆಗೊಳಿಸುವಂತೆ ಆರ್‍ಬಿಐ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಆದ್ದರಿಂದ ಗ್ರಾಹಕರು ಹಾಗೂ ವರ್ತಕರು ಹತ್ತು ರೂ. ನಾಣ್ಯಗಳನ್ನು ಪಡೆದು ಸಹಕರಿಸಬೇಕೆಂದು ನವೀನ್ ಕುಶಾಲಪ್ಪ ಮನವಿ ಮಾಡಿದ್ದಾರೆ.

 

error: Content is protected !!