ಮೇ 19 ರಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನೇರ ಫೋನ್ ಇನ್ ಸಂವಾದ ಕಾರ್ಯಕ್ರಮ

15/05/2020

ಮಡಿಕೇರಿ ಮೇ.15   : ಆಕಾಶವಾಣಿ ಮಡಿಕೇರಿ ಕೇಂದ್ರದಿಂದ ಮೇ 19 ರಿಂದ 27 ರ ವರೆಗೆ ಆಕಾಶವಾಣಿ ವಿದ್ಯಾರ್ಥಿ ಮಿತ್ರ- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ನೇರ ಫೋನ್ ಇನ್ ಸಂವಾದ ಸರಣಿ ಕಾರ್ಯಕ್ರಮ ಮೂಡಿಬರುತ್ತಿದೆ.
ಪ್ರತಿ ಕಾರ್ಯಕ್ರಮದಲ್ಲಿ ವಿವಿಧ ವಿಷಯ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಲಿದ್ದಾರೆ. ಮೇ 19 ರಂದು ಕನ್ನಡ, 20 ರಂದು ಗಣಿತ, 21 ರಂದು ಇಂಗ್ಲೀಷ್, 22 ರಂದು ವಿಜ್ಞಾನ, 26 ರಂದು ಹಿಂದಿ ಹಾಗೂ 27 ರಂದು ಸಮಾಜ ವಿಜ್ಞಾನ ವಿಷಯಗಳ ಪ್ರಸಾರ ಆಗಲಿದೆ. ಆಯಾಯ ದಿನಗಳಂದು ಸಂಜೆ 5 ಗಂಟೆಯಿಂದ 6 ರ ವರೆಗೆ ಕಾರ್ಯಕ್ರಮ ಭಿತ್ತರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಎಸ್‍ಎಂಎಸ್ ಮತ್ತು ವಾಟ್ಸಪ್ ಸಂದೇಶ ಕಳುಹಿಸುವುದರ ಮುಖಾಂತರ ಪ್ರಶ್ನೆಗಳನ್ನು ಕೇಳಬಹುದು. ಎಸ್‍ಎಂಎಸ್ ಮತ್ತು ವಾಟ್ಸಪ್ ಸಂದೇಶ ಕಳುಹಿಸಲು ಮೊಬೈಲ್ ಸಂಖ್ಯೆ 9740871827 ಮತ್ತು ನೇರ ಪ್ರಸಾರದ ಸಂದರ್ಭದಲ್ಲಿ ಪ್ರಶ್ನೆ ಕೇಳಲು ದೂರವಾಣಿ ಸಂಖ್ಯೆ 08272-229404 ನ್ನು ಸಂಪರ್ಕಿಸುವಂತೆ ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.