ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯಲು ತಿಳಿಸಿದರೆ ಬಸ್ ಓಡಿಸಲ್ಲ : ಖಾಸಗಿ ಬಸ್ ಮಾಲೀಕರ ಸ್ಪಷ್ಟನೆ

16/05/2020

ಮಡಿಕೇರಿ ಮೇ 16 : ಕೊಡಗಿನಲ್ಲಿ ಕಳೆದ 50 ದಿನಗಳಿಂದ ರಸ್ತೆಗಿಳಿಯದ ಖಾಸಗಿ ಬಸ್ ಗಳು ಸೋಮವಾರದಿಂದ ರಸ್ತೆಗಿಳಿಯುವ ಬಗ್ಗೆ ನಾಳೆ ಕೇಂದ್ರ ಸರ್ಕಾರ ಸೂಚಿಸುವ ಮಾರ್ಗ ಸೂಚಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ. ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಲು ತಿಳಿಸಿದರೆ ಬಸ್ ಗಳ ಸಂಚಾರವನ್ನು ಆರಂಭಿಸಲು ಸಾಧ್ಯವಿಲ್ಲ. ಕಡಿಮೆ ಪ್ರಯಾಣಿಕರಿಂದ ನಷ್ಟವಾಗಲಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ತಿಳಿಸಿದ್ದಾರೆ.