ಕುಂಬಾರಗಡಿಗೆಯ ಬಾಲಕನ ನೋವಿಗೆ ಸ್ಪಂದಿಸಿದ ಜಿ.ಪಂ. ಅಧ್ಯಕ್ಷರು

16/05/2020

ಮಡಿಕೇರಿ ಮೇ 16 : ಆಕಸ್ಮಿಕವಾಗಿ ಬಿದ್ದು ಎಡಕಾಲಿನ ಮೂಳೆ ಮುರಿದುಕೊಂಡು ನೋವಿನಲ್ಲೇ ದಿನ ದೂಡುತ್ತಿರುವ ಗರ್ವಾಲೆ ಗ್ರಾ.ಪಂ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ಬಾಲಕನ ಮನೆಗೆ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರು ಭೇಟಿ ನೀಡಿ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲೇ ದೂರವಾಣಿ ಮೂಲಕ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಆನಂದ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಮೈಸೂರು ಮತ್ತು ಮಂಗಳೂರಿನ ಮೂಳೆ ರೋಗ ತಜ್ಞರೊಂದಿಗೆ ಕೂಡ ಸಮಾಲೋಚನೆ ನಡೆಸಿ ಬಾಲಕನ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭವ್ಯ, ಸದಸ್ಯ ಪ್ರತ್ಯು, ಪ್ರಮುಖರಾದ ಸಿ.ಕೆ.ಬೋಪಣ್ಣ ಹಾಗೂ ಡಾ.ಬಿ.ಸಿ.ನವೀನ್ ಕುಮಾರ್ ಹಾಜರಿದ್ದರು.