ಈಜಲು ಹೋದ ಯುವಕ ನೀರುಪಾಲು

18/05/2020

ಮಡಿಕೇರಿ ಮೇ 17 : ಕಾವೇರಿ ನದಿಗೆ ಈಜಲು ತೆರಳಿದ್ದ ಯುವಕ ನೀರು ಪಾಲಾದ ಘಟನೆ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ.
ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಗ್ರಾಮದ ಪಾಲೂರಿನ ರಮೇಶ್ ಮೊಣ್ಣಪ್ಪ ಹಾಗೂ ಪುಷ್ಪ ದಂಪತಿ ಪುತ್ರ ಮೇಪಾಡಂಡ ನಿತಿನ್(27) ಎಂಬಾತನೇ ಮೃತ ದುರ್ದೈವಿ.