ವಾಜಪೇಯಿ ವಸತಿ ಶಾಲೆ ಕಾಮಗಾರಿ ಪರಿಶೀಲನೆ

18/05/2020

ಮಡಿಕೇರಿ ಮೇ 17 : ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಕಾಮಗಾರಿಯನ್ನು ಶಾಸಕ ಕೆ.ಜಿ.ಬೋಪಯ್ಯ ಪರಿಶೀಲಿಸಿದರು.
ಬಾಕಿ ಇರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಹಿಂದುಳಿದ ಇಲಾಖೆಯ ತಾಂತ್ರಿಕ ವಿಭಾಗದ ಎಂಜಿನಿಯರ್ ಗೆ ಸೂಚಿಸಿದರು.