7677 ಮಂದಿಗೆ ಗೃಹ ಸಂಪರ್ಕ ತಡೆ

18/05/2020

ಮಡಿಕೇರಿ ಮೇ 17 : ಕೊಡಗು ಜಿಲ್ಲೆಗೆ ಆಗಮಿಸುವವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದ್ದು, ಇಲ್ಲಿಯವರೆಗೆ ಒಟ್ಟು 7677 ಮಂದಿಯನ್ನು ಗೃಹ ಸಂಪರ್ಕ ತಡೆಯಲಿಡಲಾಗಿದೆ.

ಇತರೆ ರಾಜ್ಯದ 409 ಹಾಗೂ ಇತರೆ ಜಿಲ್ಲೆಗಳ 7268 ಮಂದಿ ಸಂಪರ್ಕ ತಡೆಯಲ್ಲಿದ್ದು, ಒಟ್ಟು 1468 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
1222 ಮಂದಿಯ ವರದಿ ನೆಗೆಟಿವ್ ಬಂದಿದ್ದು, 245 ಮಂದಿಯ ವರದಿ ನಿರೀಕ್ಷಿಸಲಾಗಿದೆ. ಪ್ರಸ್ತುತ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 30 ಮಂದಿಯನ್ನು ದಾಖಲಿಸಲಾಗಿದೆ.