ಮಹಿಳೆ ಮೇಲೆ ಅತ್ಯಾಚಾರ : ಇಬ್ಬರ ಬಂಧನ
18/05/2020

ಮಡಿಕೇರಿ ಮೇ 17 : ಸೌದೆ ತರಲು ಹೋಗಿದ್ದ ಮಹಿಳೆ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ಮಡಿಕೇರಿ ತಾಲೂಕಿನ ತಾವೂರು ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಬಂಧಿತ ಆರೋಪಿಗಳು. ತಾವೂರಿನ ವಿವಾಹಿತ ಮಹಿಳೆಯೊಬ್ಬರು ಸೌದೆ ತರಲು ತೆರಳಿದ್ದಾಗ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಚಿದಾನಂದ್ ಅತ್ಯಾಚಾರ ಮಾಡುವ ವೇಳೆ ಚೇತನ್ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಈ ವಿಷಯವನ್ನು ಬಹಿರಂಗ ಪಡಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರೆ ಎನ್ನಲಾಗಿದೆ.
ಭಯದಿಂದ ಮಹಿಳೆ ಸುಮ್ಮನಿದ್ದರೂ ಕೆಲವು ದಿನಗಳ ಬಳಿಕ ಆರೋಪಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ವಿಡಿಯೋ ವಿಚಾರ ತಿಳಿದು ಮಹಿಳೆ ಮಡಿಕೇರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ಆಧರಿಸಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಂಡಿದ್ದಾರೆ.