ಮೂರ್ನಾಡಿನ ಪೆಬ್ಬೆಟ್ಟಿಯಲ್ಲಿ ವೃದ್ಧನ ಶವ ಪತ್ತೆ

May 18, 2020

ಮಡಿಕೇರಿ ಮೇ 18 : ಮೂರ್ನಾಡಿನ ಪೆಬ್ಬೆಟ್ಟಿಯಲ್ಲಿ ವೃದ್ಧನ ಶವ ಪತ್ತೆಯಾಗಿದೆ.
ಐಕೊಳ ಸಮೀಪದ ಕೋರೆಯಲ್ಲಿ ಬೆಳಗ್ಗಿನ ಜಾವ ಶವವಾಗಿ ಪತ್ತೆಯಾದ ವೃದ್ಧನನ್ನು ಚಿಮ್ಮಿ ಎಂದು ಗುರುತಿಸಲಾಗಿದ್ದು, ಕಾಲು ಜಾರಿ ಕೋರೆಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಲೈನ್ ಮನೆಯೊಂದರಲ್ಲಿ ವಾಸವಿದ್ದ ಚಿಮ್ಮಿ ಕುಟುಂಬದವರಿಂದ ದೂರವಾಗಿ ಒಂಟಿಯಾಗಿ ವಾಸಮಾಡುತ್ತಿದ್ದು, ಕೆಲವು ದಿನಗಳ ಹಿಂದೆಯೇ ಕಾಣೆಯಾಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಮೂರ್ನಾಡು ಪೆÇಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

error: Content is protected !!