ಮುಂಗಾರು ಮಳೆಗೆ ಮುನ್ನ ಸೂಕ್ತ ಮುಂಜಾಗೃತ ಕ್ರಮಕೈಗೊಳ್ಳಿ: ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಮನವಿ
18/05/2020

ಮಡಿಕೇರಿ ಮೇ 18 : ಅಯ್ಯಂಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಗಾರು ಮಳೆಗಾಳಕ್ಕೆ ಮುಂಚಿತವಾಗಿ ಗ್ರಾಮ ಪಂಚಾಯತಿಯಿಂದ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಎಸ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಅಯ್ಯಂಗೇರಿ ಮನವಿ ಮಾಡಿದ್ದಾರೆ.
ಈ ಕುರಿತು ಅಯ್ಯಂಗೇರಿ ಯುವ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಯುವ ಕಾಂಗ್ರೆಸ್ ಪ್ರಮುಖರಾದ ಜಸಿಲ್, ಅಬ್ದುಲ್ ರವೂಫ್, ಸಾಬಿತ್ ಇದ್ದರು.