ಹೊರ ರಾಜ್ಯಗಳಿಂದ ಕೊಡಗಿಗೆ 400 ಕ್ಕೂ ಹೆಚ್ಚು ಮಂದಿ ಆಗಮನ

18/05/2020

ಮಡಿಕೇರಿ ಮೇ 18 : ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ 420 ಮಂದಿ ಇದ್ದು, ಇವರನ್ನು ಸಂಪರ್ಕ ತಡೆಗೆ ಒಳಪಡಿಸಲಾಗಿದೆಯೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಇಲ್ಲಿಯವರೆಗೆ ಮಹರಾಷ್ಟ್ರದಿಂದ 40 ಮಂದಿ, ತಮಿಳುನಾಡಿನಿಂದ 75 ಮಂದಿ, ಕೇರಳದಿಂದ 192, ಆಂಧ್ರಪ್ರದೇಶದಿಂದ 14 , ರಾಜಸ್ಥಾನದಿಂದ 9 ಸೇರಿದಂತೆ ನಾಲ್ಕು ನೂರಕ್ಕೂ ಹೆಚ್ಚಿನ ಮಂದಿ ಕೊಡಗಿಗೆ ಆಗಮಿಸಿದ್ದಾರೆ. ಇವರಲ್ಲಿ 200 ಮಂದಿಯ ಗಂಟಲು ಮಾದರಿ ಪರೀಕ್ಷೆಯ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.