ಮೇ 19 ಮತ್ತು 20 ರಂದು ಆಕಾಶವಾಣಿ ಕೇಂದ್ರದಿಂದ ಸಂವಾದ

18/05/2020

ಮಡಿಕೇರಿ ಮೇ.18 : ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಮೇ 19 ರಂದು ಮಧ್ಯಾಹ್ನ 1.20 ರಿಂದ 02 ಗಂಟೆಯ ವರೆಗೆ ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆ ಮತ್ತು ಕೊರೊನಾ ರೋಗಿಗಳ ಉಪಚಾರದ ವ್ಯವಸ್ಥೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್ ಅವರೊಡನೆ ನೇರ ಸಂವಾದ ಪ್ರಸಾರವಾಗಲಿದೆ.
ಹಾಗೆಯೇ ಮೇ 20 ರಂದು ಮಧ್ಯಾಹ್ನ 1.20 ರಿಂದ 2 ಗಂಟೆಯವರೆಗೆ ಕೋವಿಡ್-19 ರ ಹಿನ್ನಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯ ಅವಕಾಶಗಳ ಕುರಿತು ಐಎಎಸ್ ಪರೀಕ್ಷೆಯಲ್ಲಿ 17 ನೇ ರ್ಯಾಂಕ್ ಗಳಿಸಿರುವ ರಾಜ್ಯದ ರಾಹುಲ್ ಎಸ್ ಸಂಕನೂರ್ ಅವರೊಡನೆ ಸಂವಾದ ಇದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.