ತವರಿಗೆ ಹೊರಟ ಉತ್ತರ ಪ್ರದೇಶದ ಕಾರ್ಮಿಕರು

May 18, 2020

ಮಡಿಕೇರಿ ಮೇ.18 : ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಉತ್ತರ ಪ್ರದೇಶ ವಲಸೆ ಕಾರ್ಮಿರನ್ನು ಕಳುಹಿಸಿಕೊಡಲಾಯಿತು.
ಮಡಿಕೇರಿಯಿಂದ 2 ಕೆಎಸ್‍ಆರ್‍ಟಿಸಿ ಬಸ್ಸು, ಕುಶಾಲನಗರದಿಂದ 2, ಕೋಡ್ಲಿಪೇಟೆಯಿಂದ 1 ಮತ್ತು ವಿರಾಜಪೇಟೆಯಿಂದ 1 ಬಸ್ ಸೇರಿದಂತೆ ಒಟ್ಟು 6 ಬಸ್ಸುಗಳಲ್ಲಿ ಉತ್ತರಪ್ರದೇಶದ ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ ಸುಮಾರು 266 ಕಾರ್ಮಿಕರು ಮತ್ತು 04 ಮಕ್ಕಳು ಸೇರಿ ಒಟ್ಟು 270 ಜನರನ್ನು ತಾಲ್ಲೂಕು ಆಡಳಿತದ ಮೂಲಕ ಕುಡಿಯುವ ನೀರು, ಬಿಸ್ಕತ್ತು ಮತ್ತು ಉಪಹಾರ ನೀಡಿ, ಕಾರ್ಮಿಕ ಇಲಾಖೆಯುಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಕಾರ್ಮಿಕರನ್ನು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು.
ಬಳಿಕ ರೈಲ್ವೆ ನಿಲ್ದಾಣದಲ್ಲಿ ದಾಖಲೆ ತೋರಿಸಿ ವೈದ್ಯಕೀಯ ಪರೀಕ್ಷೆ (ಸ್ಕ್ರಿನಿಂಗ್) ಮಾಡಿಸಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ ವಿಶೇಷ ರೈಲಿನ ಮೂಲಕ ಉತ್ತರಪ್ರದೇಶಕ್ಕೆ ಕಳುಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಉಪ ವಿಭಾಗಧಿಕಾರಿ ಟಿ.ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರರಾದ ಗೋವಿಂದ ರಾಜು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಶಿರಾಜ್ ಅಹ್ಮದ್, ಗ್ರಾಮಲೆಕ್ಕಾಧಿಕಾರಿ ಸಣ್ಣ ರುದ್ರಪ್ಪ, ಪೆÇೀಲಿಸ್ ಅಧಿಕಾರಿ ಐಪಿ.ಮೇದಪ್ಪ, ಮಡಿಕೇರಿ ನಗರಸಭೆ ಸಿಬ್ಬಂದಿ ಬಶೀರ್ ಇತರರು ಇದ್ದರು.

 

error: Content is protected !!