ಕೊಡಗಿನಿಂದ ಜಾರ್ಖಂಡ್ ರಾಜ್ಯಕ್ಕೆ ಹೊರಟ ಕಾರ್ಮಿಕರು

18/05/2020

ಮಡಿಕೇರಿ ಮೇ.18 : ಮಡಿಕೇರಿಯಿಂದ ಎರಡು ಕೆಎಸ್‍ಆರ್ಟಿಸಿ ಬಸ್ಸು, ಕುಶಾಲನಗರದಿಂದ ಒಂದು ಮತ್ತು ವಿರಾಜಪೇಟೆಯಿಂದ ಎರಡು ಬಸ್ಸು ಸೇರಿದಂತೆ ಒಟ್ಟು 04 ಬಸ್ಸುಗಳಲ್ಲಿ ಜಾಖರ್ಂಡ್ ನ 188 ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ 04 ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಕಾರ್ಮಿಕ ಇಲಾಖೆಯುಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಸಂಪಾಜೆ ಚೆಕ್ ಪೆÇೀಸ್ಟ್ ಮೂಲಕ ಡಿ.ಸಿ.ಆರ್.ಬಿ ಪೆÇಲೀಸ್ ಇನ್ಸ್ಪೆಕ್ಟರ್ ಜಯರಾಮ ಅವರ ಜೊತೆಗೆ ವೈಧ್ಯಕೀಯ ಪರೀಕ್ಷೆ (ಸ್ಕ್ರಿನಿಂಗ್) ಯನ್ನು ಸಂಪಾಜೆ ಚೆಕ್ ಪೆÇೀಸ್ಟ್ ನಲ್ಲಿ ಮಾಡಿಸಿ ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ, ವಿಶೇಷ ರೈಲಿನ ಮೂಲಕ ಜಾಖರ್ಂಡಕ್ಕೆ ತೆರಳುವ ಸಲುವಾಗಿ ಕಳಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಪ್ರಾಕೃತಿಕ ವಿಕೋಪ ಪರಿಹಾರ ಸಂಸ್ಥೆಯ ಮುಖ್ಯಸ್ಥರಾದ ಅನನ್ಯ ವಾಸುದೇವ, ನಗರಸಭೆಯ ಸಿಬ್ಬಂದಿ ಬಶೀರ್, ಸುಜಿತ್, ಸೂರ್ಯ, ಆರೋಗ್ಯ ಇಲಾಖೆ ಸಿಬ್ಬಂದಿ, ಗಣೇಶ ಕೆ.ಆರ್ ಇತರರು ಇದ್ದರು.