ಮಳೆ ಹೆಚ್ಚಾಗುವ ಸಾಧ್ಯತೆ : ಕೊಡಗಿನಲ್ಲಿ ಯಲ್ಲೋ ಅಲರ್ಟ್ ಘೋಷಣೆ

18/05/2020

ಮಡಿಕೇರಿ ಮೇ 18 : ಕೊಡಗು ಜಿಲ್ಲೆಯಲ್ಲಿ ಇನ್ನೆರೆಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.

ಮೇ 19 ರವರೆಗೆ 64.5 ಮಿ.ಮೀ ನಿಂದ 115.5 ಮಿ.ಮೀ ನಷ್ಟು ಮಳೆಯಾಗುವ ಸಾಧ್ಯತೆಗಳಿದೆ. ಪ್ರಾಕೃತಿಕ ವಿಕೋಪದಂತಹ ಘಟನೆಗಳು ಸಂಭವಿಸಿ ಸಮಸ್ಯೆಗಳು ಎದುರಾದಲ್ಲಿ ದೂರವಾಣಿ ಸಂಖ್ಯೆ 08272 221077 ಅಥವಾ 8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

::: ಮಳೆ ವಿವರ :::

ಮುಂಗಾರು ಆರಂಭವಾಗುವುದಕ್ಕೂ ಮೊದಲೇ ಮಂಜಿನ ಅಲೆಗಳ ಕೊಡಗಿನಲ್ಲಿ ಮಳೆಯಾಗುತ್ತಿದ್ದು, ತಂಪಿನ ವಾತಾವರಣ ಮೂಡಿದೆ.

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 40.77 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 82.4 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.75 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 21.15 ಮಿ.ಮೀ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 51.2, ನಾಪೋಕ್ಲು 37.2, ಸಂಪಾಜೆ 111.2, ಭಾಗಮಂಡಲ 130, ವಿರಾಜಪೇಟೆ ಕಸಬಾ 10.8, ಹುದಿಕೇರಿ 2, ಪೊನ್ನಂಪೇಟೆ 7.2, ಅಮ್ಮತ್ತಿ 7, ಬಾಳೆಲೆ 24, ಸೋಮವಾರಪೇಟೆ ಕಸಬಾ 314, ಶನಿವಾರಸಂತೆ 19.4, ಶಾಂತಳ್ಳಿ 66.2, ಕೊಡ್ಲಿಪೇಟೆ 20.4, ಕುಶಾಲನಗರ 15.8, ಸುಂಟಿಕೊಪ್ಪ 10.1 ಮಿ.ಮೀ. ಮಳೆಯಾಗಿದೆ.