ಐಕೊಳ ಕೋರೆಯಲ್ಲಿ ವೃದ್ಧನ ಶವ ಪತ್ತೆ

18/05/2020

ಮಡಿಕೇರಿ ಮೇ 18 : ಮೂರ್ನಾಡಿನ ಪೆಬ್ಬೆಟ್ಟಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಐಕೊಳ ಸಮೀಪದ ಕೋರೆಯಲ್ಲಿ ಬೆಳಗ್ಗಿನ ಜಾವ ಶವವಾಗಿ ಪತ್ತೆಯಾದ ವೃದ್ಧನನ್ನು ಚಿಮ್ಮಿ ಎಂದು ಗುರುತಿಸಲಾಗಿದ್ದು, ಕಾಲು ಜಾರಿ ಕೋರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಲೈನ್ ಮನೆಯೊಂದರಲ್ಲಿ ವಾಸವಿದ್ದ ಚಿಮ್ಮಿ ಕುಟುಂಬದವರಿಂದ ದೂರವಾಗಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಸ್ಥಳಕ್ಕೆ ಮೂರ್ನಾಡು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.