ಹುಲಿ ದಾಳಿಗೆ ಹಸು ಬಲಿ : ಬೆಳ್ಳೂರು ಗ್ರಾಮದಲ್ಲಿ ಘಟನೆ

May 18, 2020

ಮಡಿಕೇರಿ ಮೇ 18 : ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಹಾಲು ಕರೆಯುವ ಹಸುವನ್ನು ಹಾಡ ಹಗಲೇ ಹುಲಿ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ.
ಜರ್ಸಿ ತಳಿಯ ದೊಡ್ಡ ಹಸು ಹಾಗೂ ಆರು ತಿಂಗಳ ಕರುವನ್ನು ಮೇಯಲು ಗದ್ದೆಯಲ್ಲಿ ಕಟ್ಟಿ ಹಾಕಿದ್ದಾಗ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಕರುವನ್ನು ಮರಳಿ ಕೊಟ್ಟಿಗೆಗೆ ಕರೆ ತರುವಾಗ ಕೇವಲ 5 ಅಡಿ ದೂರದಲ್ಲಿ ಹುಲಿ ಕಂಡು ಬಂದಿದೆ. ದಿನೇಶ್ ದೇವಯ್ಯ ಅವರು ಭಯ ಭೀತರಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪ್ರಭಾರ ಡಿ.ಎಫ್.ಓ. ರೋಶಿನಿ, ಎ.ಸಿ.ಎಫ್ ಶ್ರೀಪತಿ, ಪೆÇನ್ನಂಪೇಟೆ ಆರ್.ಎಫ್.ಓ. ತೀರ್ಥ, ಪಶು ವೈದ್ಯ ಚಂದ್ರಶೇಖರ್, ಅರಿವಳಿಕೆ ತಜ್ಞ ಡಾ.ಸನತ್, ಡಬ್ಲು.ಐ.ಐ. ಕನ್ಸಲ್ಟೆಂಟ್ ಚಕ್ಕೇರ ತಮ್ಮಯ್ಯ ಹಾಗೂ ಸಿಬ್ಬಂದಿ ಆಗಮಿಸಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದೆ.

error: Content is protected !!