ಪರೀಕ್ಷಾ ವೇಳಾ ಪಟ್ಟಿ ಪ್ರಕಟ

May 19, 2020

ನವದೆಹಲಿ ಮೇ 18 : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ) 10- 12ನೇ ತರಗತಿ ಹೊಸ ಪರೀಕ್ಷಾ ವೇಳಾ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಜುಲೈ 1ರಿಂದ 15 ವರೆಗೆ 10-12ನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂಬ ನಿಬಂಧನೆ ವಿಧಿಸಲಾಗಿದೆ. ಆದೇ ರೀತಿ ಸ್ಯಾನಿಟೈಸರ್ ಸಮೇತ ಪರೀಕ್ಷಾ ಕೊಠಡಿಗೆ ಬರಬೇಕು ಎಂದು ಸಿಬಿಎಸ್ ಇ ತಿಳಿಸಿದೆ.
ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿಸುವುದಿಲ್ಲ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿರುವ ಮೂರು ಸಾವಿರ ಸಿಬಿಎಸ್ ಇ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ರಮೇಶ್ ಪೊಕ್ರಿಯಾಲ್ ಪ್ರಕಟಿಸಿದ್ದಾರೆ
ಸುಮಾರು 1.5 ಕೋಟಿಗೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಲಾಕ್ ಡೌನ್ ಕಾರಣದಿಂದ ನಿಗದಿಯಂತೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
10 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಈಶಾನ್ಯ ದೆಹಲಿಯಲ್ಲಿ ಮಾತ್ರ ಬಾಕಿ ಇದ್ದು, ಜುಲೈ 1 ರಿಂದ ನಾಲ್ಕು ದಿನಗಳ ವರೆಗೆ ನಡೆಯಲಿದೆ. ಜುಲೈ 10 ರಂದು 10-12 ನೇ ತರಗತಿಯವರಿಗೆ ಹಿಂದಿ ಪರೀಕ್ಷೆ ನಡೆಯಲಿದ್ದು, ಜುಲೈ 15 ರಂದು ಎರಡೂ ತರಗತಿಗಳ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಪರೀಕ್ಷೆ ನಡೆಯಲಿದೆ.

 

 

error: Content is protected !!