ಎಂಎಲ್‍ಸಿಯಾಗಿ ಠಾಕ್ರೆ ಪ್ರಮಾಣ ವಚನ

19/05/2020

ಮುಂಬೈ ಮೇ 18 : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸೋಮವಾರ ಮಧ್ಯಾಹ್ನ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಎಂಟು ಸದಸ್ಯರು ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಪರಿಷತ್ ಸಭಾಪತಿ ರಾಮರಾಜೆ ನಿಂಬಾಳ್ಕರ್ ನೂತನ 9 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಪತ್ನಿ ರಷ್ಮಿ ಠಾಕ್ರೆ ಮತ್ತು ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು. ಖಾಲಿ ಉಳಿದಿದ್ದ ವಿಧಾನಪರಿಷತ್ತಿನ 9 ಸ್ಥಾನಗಳಿಗೆ ನಾಮಪತ್ರಸಲ್ಲಿಸಿದ ನಂತರ ಮೇ 14 ರಂದು ಎಲ್ಲ ಒಂಬತ್ತು ಮಂದಿ ಅವಿರೋಧವಾಗಿ ಚುನಾಯಿತರಾಗಿದ್ದರು. ಉದ್ದವ್ ಠಾಕ್ರೆ ಅವರೊಂದಿಗೆ ಶಿವಸೇನೆಯ ನೀಲಂ ಗೋರೆ ಬಿಜೆಪಿಯಿಂದ ಗೋಪಿಚಂದ್ ಪಡಲ್ಕರ್, ಪ್ರವೀಣ್ ದಾಟ್ಕೆ, ರಂಜಿತ್ ಸಿಂಹ್ ಮೋಹಿತ್ ಪಾಟೀಲ್, ರಮೇಶ್ ಕರಾದ್, ಕಾಂಗ್ರೆಸ್ ನ ರಾಜೇಶ್ ರಾಥೋಡ್, ಎನ್ ಸಿಪಿ ಸೇರಿದ ಶಶಿಕಾಂತ್ ಶಿಂಧೆ ಆಮೂಲ್ ಮಿಟ್ಕಾರಿ ಪ್ರಮಾಣ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.