ಮಡಿಕೇರಿ ಪೊಲೀಸರಿಗೆ ಮಿಸ್ಟಿ ಹಿಲ್ಸ್ ನಿಂದ ಪ್ರಶಂಸೆ

May 19, 2020

ಮಡಿಕೇರಿ ಮೇ 19 : ಲಾಕ್ ಡೌನ್ ಸಂದರ್ಭದಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ನಿಂದ ಊಟ ವಿತರಿಸಿ ಕರೋನಾ ವಿರುದ್ದ ಹೋರಾಡುತ್ತಿರುವ ಪೊಲೀಸರ ಸೇವಾ ಗುಣವನ್ನು ಗೌರವಿಸಲಾಯಿತು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಡಿಕೇರಿಯಲ್ಲಿ ಕರ್ತವ್ಯ ನಿರತ ಪೊಲೀಸರಿಗೆ 18 ದಿನಗಳ ಕಾಲ ಮಧ್ಯಾಹ್ನದ ಭೋಜನ ವಿತರಿಸಲಾಗಿತ್ತು. ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಿಂದ ಈ ಉದ್ದೇಶಕ್ಕೆ 71 ಸಾವಿರ ರು. ಸಂಗ್ರಹಿಸಲಾಗಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಲಾಕ್ ಡೌನ್ ಸಂದರ್ಭ ಜನರ ಸಂಚಾರ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಪೊಲೀಸರು ನಿರಂತರ ಶ್ರಮ ವಹಿಸಿದ್ದಾರೆ. ಇದನ್ನು ಪರಿಗಣಿಸಿ ಮಿಸ್ಟಿ ಹಿಲ್ಸ್ ನಿಂದ ಪೊಲೀಸರಿಗೆ 18 ದಿನ ಉತ್ತಮ ಊಟ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರ ಕತ9ವ್ಯ ಕಾಯ9ವೈಖರಿಯನ್ನು ಮಿಸ್ಟಿ ಹಿಲ್ಸ್ ತಂಡ ಪ್ರಶಂಸೆ ವ್ಯಕ್ತಪಡಿಸಿತು ಎಂದೂ ಜಗದೀಶ್ ಪ್ರಶಾಂತ್ ಹಾಗೂ ಕಾರ್ಯದರ್ಶಿ ಪ್ರಮೋದ್ ರೈ ತಿಳಿಸಿದ್ದಾರೆ.

ಇ ಸಭೆಗಳು. :

ಲಾಕ್ ಡೌನ್ ಸಂದರ್ಭ ಸಭೆಗಳನ್ನು ನಡೆಸಲಾಗದ ಹಿನ್ನಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಪ್ರತೀ ಮಂಗಳವಾರದ ವಾರದ ರೋಟರಿ ಸಭೆಗಳನ್ನು ಎರಡು ತಿಂಗಳಿನಿಂದ ಇ ಸಭೆಗಳಾಗಿ ಪರಿವರ್ತಿಸಲಾಗಿದೆ. ಪ್ರತೀ ಮಂಗಳವಾರ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಮಿಸ್ಟಿ ಹಿಲ್ಸ್ ಸದಸ್ಯರು ವಾಟ್ಸಪ್ ಗ್ರೂಪ್ ನಲ್ಲಿ ಆಯೋಜಿತ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಾರ್ಥನೆಯಿಂದ ಮೊದಲ್ಗೊಂಡು ರೋಟರಿ ಸಭೆಯ ಎಲ್ಲಾ ಕಾರ್ಯಸೂಚಿಗಳನ್ನೂ ಈ ಮೀಟಿಂಗ್ ನಲ್ಲಿ ಜಾರಿಗೆ ತರಲಾಗಿದ್ದು ಯೋಜನಾ ಕಾರ್ಯಗಳಿಗೆ ಇದು ನೆರವಾಗಿದೆ.

ಮಿಸ್ಟಿ ಹಿಲ್ಸ್ ಇ ಸಭೆಗಳ ಮೂಲಕ ರೋಟರಿಯಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕಾದ ನಿಯಮವನ್ನು ಜಾರಿಯಲ್ಲಿಟ್ಟಿರುವುದು ಪ್ರಶಂಸನೀಯ. ಈ ಮೂಲಕ ಸೇವಾ ಸಂಸ್ಥೆಯಾದ ರೋಟರಿಯು ಲಾಕ್ ಡೌನ್ ಸಂದರ್ಭ ಅಗತ್ಯವಿರುವ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇ ಸಭೆಗಳು ನೆರವಾಗಿದೆ ಎಂದೂ ರೋಟರಿ ವಲಯ ಸಹಾಯಕ ಗವನ9ರ್ ಪಿ.ನಾಗೇಶ್ ಮತ್ತು ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ.ಪ್ರಶಂಶಿಸಿದ್ದಾರೆ.

 

 

.

error: Content is protected !!