ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಹನೀಫ್ ದಾರಿಮಿ ಮನವಿ

May 19, 2020

ಮಡಿಕೇರಿ ಮೇ 19 :  ದೇಶದಾದ್ಯಂತ  ಕರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಅನೇಕ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಅಲ್ಲದೇ ಮಂದಿರ, ಮಸೀದಿ, ಚರ್ಚುಗಳನ್ನು ಮುಚ್ಚಿ ಸಲಾಗಿದೆ ಈ ಸಂದರ್ಭದಲ್ಲಿ ಯಾರಿಗೂ ದಕ್ಕೆ ಆಗದ ರೀತಿಯಲ್ಲಿ  ಈದ್ ಆಚರಣೆ ಹಬ್ಬ ಅತಿ ಸರಳ ರೀತಿಯಲ್ಲಿ ಆಚರಿಸಲು ಶನಿವಾರಸಂತೆ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರು ಹನೀಫ್ ದಾರಿಮಿ ಮನವಿ ಮಾಡಿದ್ದಾರೆ .
ಎಸ್ ಕೆ ಎಸ್ ಎಸ್ ಎಫ್ ಕೇಂದ್ರದಿಂದ ಹಿಡಿದು ಹಲವಾರು ಶಾಖೆಗಳು ಹಾಗೂ ಹಲವಾರು ಸಂಘಟನೆಗಳು ಊರಿನ ಯುವ ಸಮೂಹವು ಈ ಸಂದರ್ಭದಲ್ಲಿ ಮಹಾಮಾರಿ ರೋಗಕ್ಕೆ ತತ್ತರಿಸಿದ ಬಡಕುಟುಂಬಗಳಿಗೆ ಕಿಟ್ಟು ಮೂಲಕ ಭಕ್ಷ್ಯ ವಸ್ತುಗಳನ್ನು ವಿತರಿಸಲಾಗುವುದು. ಅದೇ ರೀತಿ ಹಬ್ಬದ ಸಮಯದಲ್ಲೂ ಕೂಡ ಸರ್ವ ಜನಾಂಗದ ಬಡ ಕುಟುಂಬಗಳನ್ನು ಪರಿಗಣಿಸಬೇಕಾಗಿರುವುದು ನಮ್ಮ ಕರ್ತವ್ಯ. ಆದ್ದರಿಂದ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂಜಾಗ್ರತೆಯ ಕ್ರಮವನ್ನು ಪಾಲಿಸಿ ಅತಿ ಸರಳವಾಗಿ  ಈ ಹಬ್ಬವನ್ನು  ಆಚರಿಸುವಂತೆ ಮನವಿ ಮಾಡಿದರು.

 

 

error: Content is protected !!