ಸಂಪಾಜೆಯಲ್ಲಿ ಬಡ ಕುಟುಂಬಗಳಿಗೆ ಕಾಂಗ್ರೆಸ್ ಪ್ರಮುಖರಿಂದ ಕಿಟ್ ವಿತರಣೆ

19/05/2020

ಮಡಿಕೇರಿ ಮೇ 19 : ಸಂಪಾಜೆಯಲ್ಲಿ ಹಿರಿಯ ಕಾಂಗ್ರೆಸಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮೊಹಿದ್ದೀನ್ ಕುಂಞ ಹಾಜಿ ಅವರು ಕೋವಿಡ್ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ತತ್ತರಿಸಿರುವ ಬಡ ಕುಟುಂಬಗಳಿಗೆ ರಂಜಾನ್ ಪ್ರಯುಕ್ತ ಮನೆ ಮನೆಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ಮತ್ತು ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು ತರಕಾರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಪಿ.ಎಲ್ ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಪಿ, ಹನೀಫ್, ಗ್ರಾಮ ಪಂಚಾಯತ್ ಸದಸ್ಯೆ ರಾಜೇಶ್ವರಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಕುಮಾರ್ ಚೆದ್ಕಾರ್, ಸಂಪಾಜೆ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ್ ಕನ್ಯಾನ, ಕಾಂಗ್ರೆಸ್ ಮುಖಂಡರಾದ ಬಾಬು ಚೆಡಾವು, ಉಮೇಶ್ ಗಾಣಿಗದ್ದೆ, ವಾಸು ಪೂಜಾರಿ, ದೇವಪ್ಪ ದೇವಜನ, ತಿಮ್ಮಪ್ಪ ಸಂಪಾಜೆ, ರಾಮ ಅರಮನೆತೋಟ, ನಾರಾಯಣ ಅರಮನೆ ತೋಟ, ಮೊಹನ್ ಬಾಳಕಜೆ, ಮೀನಪ್ಪ ಬಳ್ಳಕ್ಕ ಚೆಂಬು ಮತ್ತು ಇತರರು ಸಾಥ್ ನೀಡಿದರು.