ಕೊಡಗಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

19/05/2020

ಮಡಿಕೇರಿ ಮೇ.19 : ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 5 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 18 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 10 ಸಾವಿರ ಮತ್ತು ಸಹಾಯಕಿಯರಿಗೆ ರೂ. 5,250 ಗೌರವಧನ ಪಾವತಿಸಲಾಗುತ್ತದೆ.
ಖಾಲಿ ಇರುವ ಕೇಂದ್ರಗಳ ಮಾಹಿತಿ: ಬಲ್ಯಮಂಡೂರು (ಮಿನಿ) ಮಂಚಳ್ಳಿ 2, ಮಲ್ಲೂರು, ಕೋತೂರು 2 ಮತ್ತು ಅಯ್ಯಪ್ಪ ಬೆಟ್ಟದಲ್ಲಿ 1 ಸೇರಿದಂತೆ 5 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು. ಮಂಚಳ್ಳಿ 2, ಬೆಳ್ಳುಮಾಡು 1, ವಿ.ಬಾಡಗ, ಹೊಸಕಲ್ಲಿಕೋಟೆ, ಕಾಟಿಗುಂಡಿ ಪೈಸಾರಿ, ಆಂಗೋಡು, ತೆರಾಲು 2, ಕುಂದೂರು, ಪರಕಟಗೇರಿ, ತೋಮರ, ಬೊಮ್ಮಾಡು, ಮಲ್ಲೂರು, ಅರುವತ್ತೊಕ್ಲು 2, ನಿಟ್ಟೂರು, ಕುರ್ಚಿ 2, ಬೇತ್ರಿ, ಹೈಸೋಡ್ಲೂರು, ಅಂಬುಕೋಟೆಯಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇವೆ.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಮೇ 20 ರಿಂದ ಪ್ರಾರಂಭಿಸಿ, ಜೂನ್ 19 ರ ವರೆಗೆ ಕೊನೆಯ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆಯರ ಹುದ್ದೆಗೆ 10 ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9 ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್ ಸೈಟ್‍ನಲ್ಲಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿರುತ್ತದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ದೂರವಾಣಿ ಸಂಖ್ಯೆ 08274-249010, 249788 ಸಂಪರ್ಕಿಸಬಹುದಾಗಿದೆ.