1971 ರ ಯುದ್ಧಕ್ಕೆ 50 ವರ್ಷ : ಹೆಸರು ನೋಂದಾಯಿಸಲು ಮನವಿ

19/05/2020

ಮಡಿಕೇರಿ ಮೇ 19 : 1971 ರ ಯುದ್ಧದ 50 ವರ್ಷದ ವಿಜಯ ದಿವಸವನ್ನು ಆಚರಿಸುವ ಸಂಬಂಧ 1971 ರ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಾಜಿ ಸೈನಿಕರು ಜೂನ್ 30 ರೊಳಗೆ ಹೆಸರನ್ನು ನೋಂದಾಯಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಅವರು ಕೋರಿದ್ದಾರೆ.