ಶ್ರೀ ಮಂಗಲದಲ್ಲಿ ಕೊನೆಗೂ ಸೆರೆಯಾಯಿತು ಗೋಭಕ್ಷಕ ಹುಲಿ

May 20, 2020

ಮಡಿಕೇರಿ ಮೇ 20 : ದಕ್ಷಿಣ ಕೊಡಗಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗೋಭಕ್ಷಕ ಹುಲಿ ಕೊನೆಗೂ ಸೆರೆಯಾಗಿದೆ.
ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಕಳೆದ ಒಂದು ತಿಂಗಳಿನಿಂದ ವಿವಿಧ ಗ್ರಾಮಗಳಲ್ಲಿ ಹಸುಗಳನ್ನು ಭಕ್ಷಿಸುವ ಮೂಲಕ ‌ಆತಂಕವನ್ನು ಸೃಷ್ಟಿಸಿದ್ದ ಹುಲಿ ಸೆರೆಗೆ ಗ್ರಾಮಸ್ಥರಿಂದ ಅರಣ್ಯ ‌ಇಲಾಖೆ ಮೇಲೆ ಒತ್ತಡವಿತ್ತು. ಡಾ.ಸನತ್ ಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುಲಿ ಸೆರೆಯಾಗಿದೆ.

 

 

error: Content is protected !!