ಸಾವಿನ ಸಂಖ್ಯೆ 3,163 ಕ್ಕೆ ಏರಿಕೆ

May 20, 2020

ನವದೆಹಲಿ ಮೇ 19 : ಭಾರತವು ಇಲ್ಲಿಯವರೆಗೆ ಪ್ರತಿ ಲಕ್ಷ ಜನಸಂಖ್ಯೆಗೆ 0.2ರಷ್ಟು ಕೋವಿಡ್ 19 ಸಾವಿನ ಪ್ರಕರಣವನ್ನು ಕಂಡಿದೆ ಎಂದು ಜಾಗತಿಕ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಕೊರೋನಾವೈರಸ್ ಸೋಂಕಿನಿಂದಾಗಿ ಸತ್ತವರ ಸಂಖ್ಯೆ ಮಂಗಳವಾರದವರೆಗೆ 3,163 ಕ್ಕೆ ತಲುಪಿದೆ. ಒಟ್ತೂ ಸೋಂಕಿತರ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದೆ.
ಅಲ್ಲದೆ, ದೇಶದಲ್ಲಿ ಸೋಮವಾರ ದಾಖಲೆಯ 1,08,233 ಕೋವಿಡ್ -19 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು 24,25,742 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಡಬ್ಲ್ಯುಎಚ್‍ಒ ಸಿಚುವೇಷನ್ ರಿಪೋರ್ಟ್ -119 ರ ದತ್ತಾಂಶವನ್ನು ಉಲ್ಲೇಖಿಸಿ ಸಚಿವಾಲಯವು ವಿಶ್ವಾದ್ಯಂತ ಮಂಗಳವಾರದವರೆಗೆ 3,11,847 ಕೋವಿಡ್ -19 ಸಾವುಗಳು ವರದಿಯಾಗಿವೆ, ಇದು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 4.1 ಶೇ. ಆಗಲಿದೆ ಎಂದಿದೆ.
ಹೆಚ್ಚಿನ ಕೋವಿಡ್ -19 ಸಾವುನೋವು ಹೊಂದಿರುವ ದೇಶಗಳಲ್ಲಿ, 87,180 ಸಾವು ಜನಸಂಖ್ಯೆಗೆ ಸಂಭವಿಸಿರುವ ಯುನೈಟೆಡ್ ಸ್ಟೇಟ್ಸ್ ಪ್ರತಿ ಲಕ್ಷ ಜನಸಂಖ್ಯೆಗೆ 26.6 ರಷ್ಟು ಸಾವನ್ನು ಕಂಡಿದೆ.ಯುನೈಟೆಡ್ ಕಿಂಗ್‍ಡಮ್ 34,636 ಸಾವುಗಳನ್ನು ವರದಿ ಮಾಡಿದೆ ಮತ್ತು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 52.1 ಸಾವಿನ ಪ್ರಕರಣ ಹೊಂದಿದೆ.

 

 

 

 

error: Content is protected !!