ಮಂಡ್ಯದಲ್ಲಿ 71 ಮಂದಿಗೆ ಸೋಂಕು

May 20, 2020

ಮಂಡ್ಯ ಮೇ 19 : ಮಂಡ್ಯ ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾಗಿರುವ ಎಲ್ಲಾ 71 ಕೊರೋನಾ ಸೋಂಕಿತ ವ್ಯಕ್ತಿಗಳು ಮುಂಬೈನಿಂದ ಆಗಮಿಸಿದವರು ಎಂದು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದರು.
ಇಂದು ಕೊವಿಡ್-19 ಕುರಿತ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನಿಡಿದ ಅವರು, ಮುಂಬೈನ ಸಂತ ಕ್ರೂಸ್, ಅಂಧೇರಿ, ನೆಹರು ನಗರ, ವಿಲೇ ಪಾರ್ಲೆ ಮತ್ತು ಮುಂಬೈ ಪಶ್ಚಿಮದಲ್ಲಿ ಬಹಳ ವರ್ಷಗಳಿಂದ ಬ್ಯಾಂಕ್, ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದವರು, ಗೃಹಿಣಿಯರು ಮೇ 15 ಹಾಗೂ 16ರಂದು ಮಂಡ್ಯಕ್ಕೆ ಮರಳಿದ್ದರು. ಅವರ ಗಂಟಲ ದ್ರವಗಳನ್ನು ಸಂಗ್ರಹಿಸಿ ತಪಾಸಣೆ ಕಳುಹಿಸಲಾಗಿತ್ತು. ಪ್ರತಿಯೊಬ್ಬರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಎಂದರು.
62 ಸೋಂಕಿತ ಪ್ರಕರಣದಲ್ಲಿ 41 ಪ್ರಕರಣಗಳು ಕೆ.ಆರ್.ಪೇಟೆ, 21 ಪ್ರಕರಣಗಳು ನಾಗಮಂಗಲದಲ್ಲಿ ವರದಿಯಾಗಿವೆ. ಇವರಲ್ಲಿ 26 ಪುರುಷರು, 23 ಮಹಿಳೆಯರು, 7 ಗಂಡು, 6 ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ 1 ವರ್ಷದ ಮಗುವಿನಿಂದ 65 ವರ್ಷದ ವೃದ್ಧರವರೆಗೆ ಎಲ್ಲಾ ವಯೋಮಾನದವರೂ ಇದ್ದಾರೆ ಎಂದು ಮಾಹಿತಿ ನೀಡಿದರು.

 

error: Content is protected !!