ಖಾಸಗಿ ವಾಹನ ಮಾಲೀಕರಿಗೆ ಸಿಹಿಸುದ್ದಿ

20/05/2020

ಬೆಂಗಳೂರು ಮೇ 19 : ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವು ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿಸುದ್ದಿ ನೀಡಿದೆ.
ಹೌದು, ರಾಜ್ಯದ ಖಾಸಗಿ ಬಸ್, ಟೆಂಪೋ, ಟ್ಯಾಕ್ಸಿಗಳಿಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ನೀಡಿದೆ. ಕೊರೊನಾ ಲಾಕ್‍ಡೌನ್ ನಿಂದಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸಲು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಇಲ್ಲವೆ ಅಧಿಕೃತ ಪ್ರಾಧಿಕಾರಗಳಿಂದ ಸಂಚಾರಕ್ಕೆ ಅನುಮತಿ ಪಡೆದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.ಈ ಮೂಲಕ ರಾಜ್ಯದ ಖಾಸಗಿ ವಾಹನಗಳಿಗೆ ಸರ್ಕಾರವು ಒಟ್ಟು ಎರಡು ತಿಂಗಳ ತೆರಿಗೆ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ.
ಕೋವಿಡ್-19 ಹಿನ್ನೆಲೆ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 16(1)ರ ಅನ್ವಯ ರಾಜ್ಯದಲ್ಲಿ ನೋಂದಾಯಿಸಿರು (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ತೆರಿಗೆಯನ್ನು ಮಾರ್ಚ್ 24ರಿಂದ ಮೇ 23ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.