ಮೈಸೂರು ತ್ಯಾಜ್ಯ ಮುಕ್ತ ನಗರ

20/05/2020

ಮೈಸೂರು ಮೇ 19 : ಮೈಸೂರು ನಗರವನ್ನು 5 ಸ್ಟಾರ್ ತ್ಯಾಜ್ಯ ಮುಕ್ತ ನಗರವನ್ನಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.
ಮೇ.19 ರಂದು ಕೇಂದ್ರ ಸರ್ಕಾರ ಭಾರತದಲ್ಲಿರುವ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯನ್ನು ಘೋಷಿಸಿದ್ದು ದಕ್ಷಿಣ ಭಾರತದಲ್ಲಿ ಮೈಸೂರು ನಗರ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ.
ಉಳಿದಂತೆ, ಅಂಬಿಕಾಪುರ್, ರಾಜ್ ಕೋಟ್, ಸೂರತ್, ಇಂದೋರ್, ನವಿ ಮುಂಬೈ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ತ್ಯಾಜ್ಯ ಮುಕ್ತವನ್ನಾಗಿ ಮಾಡಲು ಮೈಸೂರು ನಗರ ಪಾಲಿಕೆಯ ಶ್ರಮ ಫಲ ನೀಡಿದೆ. 25 ಪ್ರಮುಖ ನಿಯತಾಂಕಗಳ ಆಧಾರದಲ್ಲಿ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳನ್ನು ಘೋಷಿಸಲಾಗಿದೆ. ಬಗ್ಗೆ ಎಂಸಿಸಿ ಆಯುಕ್ತ ಗುರುದತ್ತ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದು, ಆರೋಗ್ಯ ತಂಡ, ಪೌರ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ್ದಾರೆ. ಸತತ ಎರಡನೇ ಬಾರಿಗೆ 5 ಸ್ಟಾರ್ ರೇಟಿಂಗ್ ಬರುವಂತೆ ಮಾಡಿದ ಕೀರ್ತಿ ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದು ಹೇಳ್ದಿದಾರೆ.