ಮಡಿಕೇರಿಯಲ್ಲಿ ಗಾಂಜಾ ದಂಧೆ : ಮೂವರ ಬಂಧನ

21/05/2020

ಮಡಿಕೇರಿ ಮೇ 20 : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರ ಬಳಿಯಲ್ಲಿದ್ದ 1.150 ಕೆ.ಜಿ. ಗಾಂಜಾ ಮತ್ತು ವಾಹನವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಮಹದೇವಪೇಟೆಯ ಸಫ್ವಾನ್ ಎಂ.ಹೆಚ್., ಗಣಪತಿ ಬೀದಿಯ ಎಂ.ಎ. ಇಮ್ರಾನ್ ಮತ್ತು ಇಮ್ರಾನ್ ಎಂ.ಹೆಚ್. ಎಂಬವರೆ ಬಂಧಿತ ವ್ಯಕ್ತಿಗಳು.
ನಗರದ ದಾಸವಾಳ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಅವರ ಬಳಿಯಲ್ಲಿದ್ದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಯಾಂಟ್ರೋ ಕಾರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಎಸ್‍ಪಿ ಡಾ. ಸುಮನ್ ಪನ್ನೇಕರ್ ತಿಳಿಸಿದರು.
ಎಸ್‍ಪಿ ಡಾ. ಸುಮನ್ ಪನ್ನೇಕರ್ ನಿರ್ದೇಶನದಂತೆ, ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಸಿಐ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೆÉೀರಿ ನಗರ ಠಾಣಾ ಎಸ್‍ಐ ಅಂತಿಮ ಎಂ.ಟಿ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.