ಹೋಟೆಲ್ ತಾಜ್ ವಿವಾಂತ ಸಂಸ್ಥೆಯಿಂದ 4.95 ಲಕ್ಷ ರೂ. ವೆಚ್ಚದ ನೆರವು

May 22, 2020

ಮಡಿಕೇರಿ ಮೇ 21 : ಜಿಲ್ಲಾಡಳಿತದ ಪ್ರಯತ್ನದಿಂದ ತಾಜ್ ಹೋಟೆಲ್ ಸಂಸ್ಥೆಯವರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕೋವಿಡ್ ಆಸ್ಪತ್ರೆ ಉಪಯೋಗಕ್ಕಾಗಿ ಸುಮಾರು 4.95 ಲಕ್ಷ ರೂ ವೆಚ್ಚದಲ್ಲಿ 22 ಆಕ್ಸಿಜನ್ ಪೈಪ್‍ಲೈನ್ ಪಾಯಿಂಟ್ ಮತ್ತು 22 ಸಕ್ಷನ್ ಪೈಪ್‍ಲೈನ್ ಜೊತೆಗೆ ಔಟ್‍ಲೆಟ್ಸ್ ಮತ್ತು ಫ್ಲೋ ಮೀಟರ್ ಅನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಉಪಸ್ಥಿತಿಯಲ್ಲಿ ಒದಗಿಸಿದ್ದಾರೆ.ಈ ಸೌಲಭ್ಯದಿಂದಾಗಿ 55 ಕೊರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಭಿಯಂತರರ ಮೇಲುಸ್ತುವಾರಿಯಲ್ಲಿ ಬೆಂಗಳೂರಿನ ರಾಮಕೃಷಿ ಕನ್ಸ್‍ಟ್ರಕ್ಷನ್ಸ್ ಅವರು ನಡೆಸಿಕೊಡುತ್ತಿದ್ದಾರೆ. ಈ ಸಂದರ್ಭ ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪ, ಮಂಜುನಾಥ್ ಹಾಜರಿದ್ದರು.

error: Content is protected !!