ಕೊರೋನಾಗೆ ಮೂವರು ಪತ್ರಕರ್ತರ ಸಾವು

22/05/2020

ಇಸ್ಲಾಮಾಬಾದ್ ಮೇ 21 : ಪಾಕಿಸ್ತಾನದಲ್ಲಿ ಮೂವರು ಪತ್ರಕರ್ತರು ಕೊರೋನಾ ವೈರಸ್‍ನಿಂದ ಸಾವನ್ನಪ್ಪಿದ್ದು, 156 ಮಾಧ್ಯಮ ವ್ಯಕ್ತಿಗಳು ಕೊವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಕಿಸ್ತಾನ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್(ಪಿಎಫ್‍ಯುಜೆ) ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಕ್ಯಾಮೆರಾ ಮತ್ತು ಫೋಟೋ ಪತ್ರಕರ್ತರು ಕೊರೋನಾದ ಪೀಡಿಗೆಗೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.
ಮೃತರು ಮುಲ್ತಾನ್ ಮತ್ತು ಇಬ್ಬರು ಸುಕ್ಕೂರ್‍ಗೆ ಸೇರಿದವರಾಗಿದ್ದಾರೆ. ವರದಿಯ ಪ್ರಕಾರ, 69 ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಉಳಿದವರು ಗೃಹಬಂಧನದಲ್ಲಿದ್ದು, ಅಪಾಯದಿಂದ ಹೊರಬಂದಿದ್ದಾರೆ. ಫೈಸಲಾಬಾದ್, ಬಹವಾಲ್ಪುರ್ ಮತ್ತು ರಹೀಂ ಯಾರ್ ಖಾನ್ ಪತ್ರಕರ್ತರಿಗೆ ಕರೋನಾ ಸೋಂಕಿನ ಬಗ್ಗೆ ಯಾವುದೇ ಪ್ರಕರಣಗಳು ಇನ್ನೂ ವರದಿಯಾಗಿಲ್ಲ.
ಲಾಹೋರ್‍ನಲ್ಲಿಯೇ ಗರಿಷ್ಠ 84 ಪತ್ರಕರ್ತರು ಸೋಂಕಿಗೆ ಒಳಗಾಗಿದ್ದಾರೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‍ನಿಂದ ತಲಾ 24, ಕ್ವೆಟ್ಟಾದಿಂದ 17, ಪೇಶಾವರದಿಂದ 12, ಕರಾಚಿಯಿಂದ ಒಂಬತ್ತು, ಸುಕ್ಕೂರ್ ಆರು, ಮುಲ್ತಾನ್ ಐದು, ಗುಜ್ರಾನ್‍ವಾಲಾ ಮತ್ತು ಹೈದರಾಬಾದ್‍ನಿಂದ ತಲಾ ಎರಡು ಪ್ರಕರಣ ದಾಖಲಾಗಿವೆ.