ಉಡುಪಿಯನ್ನು ಕಾಡಿದ ಕೊರೋನಾ

22/05/2020

ಬೆಂಗಳೂರು ಮೇ 21 : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮಂಡ್ಯ ಹಾಗೂ ಹಾಸನಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಉಡುಪಿಗೆ ತಟ್ಟಿದೆ.
ಗುರುವಾರ ಬೆಂಗಳೂರು ನಗರದಲ್ಲಿ 7, ಹಾಸನದಲ್ಲಿ 13, ಮಂಡ್ಯದಲ್ಲಿ 33, ದಕ್ಷಿಣ ಕನ್ನಡದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ದಾವಣಗೆರೆಯಲ್ಲಿ 3, ಬೆಳಗಾವಿಯಲ್ಲಿ 9, ವಿಜಯಪುರದಲ್ಲಿ 1, ಬೆಳಗಾವಿಯಲ್ಲಿ 2, ಶಿವಮೊಗ್ಗದಲ್ಲಿ 6, ಧಾರವಾಡದಲ್ಲಿ 5, ಮೈಸೂರಿನಲ್ಲಿ 1, ಉತ್ತರ ಕನ್ನಡದಲ್ಲಿ 7, ಉಡುಪಿಯಲ್ಲಿ 26, ಬಳ್ಳಾರಿಯಲ್ಲಿ 11, ತುಮಕೂರಿನಲ್ಲಿ 1, ಗದಗ 2, ರಾಯಚೂರಿನಲ್ಲಿ 5, ಕೋಲಾರದಲ್ಲಿ 2 ಪ್ರಕರಣಗಳು ವರದಿಯಾಗಿವೆ. ಜೊತೆಗೆ, ಕ್ವಾರಂಟೈನ್ ಗೆ ಒಳಪಟ್ಟಿರುವ ಅನ್ಯ ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಐವರಲ್ಲಿ ಸೋಂಕು ವರದಿಯಾಗಿದೆ.
ಇವರಲ್ಲಿ ಬಹುತೇಕರು ಮುಂಬೈಗೆ ಪ್ರಯಾಣ ಬೆಳೆಸಿ ಹಿನ್ನೆಲೆ ಹೊಂದಿದ್ದಾರೆ. ದಕ್ಷಿಣ ಕನ್ನಡಕ್ಕೆ ದುಬೈಯಿಂದ ಆಗಮಿಸಿದವರಿಗೆ ಸೋಂಕು ತಗಲಿದೆ. ಉಳಿದಂತೆ ರಾಯಘಡ, ತಮಿಳುನಾಡು, ತೆಲಂಗಾಣ, ರಾಯಘಡ, ಥಾಣೆ, ಜಾರ್ಖಂಡ್, ಅಜ್ಮೀರ್ ನಿಂದ ಆಗಮಿಸಿದ್ದವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.