ಸಿಂಹಗಳ ಹಿಂಡಿನ ನಡುವೆ ಹೆರಿಗೆ !

22/05/2020

ಗಿರ್ ಸೋಮನಾಥ್ ಮೇ 21 : ಸಿಂಹಗಳ ಹಿಂಡು ಸುತ್ತುವರಿದ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ಗಿರ್ ಸೋಮನಾಥ್ ನಲ್ಲಿ ವರದಿಯಾಗಿದೆ.
ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯ ಮನೆಗೆ ಆಂಬುಲೆನ್ಸ್ ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯದಲ್ಲಿ ನಾಲ್ಕು ಸಿಂಹಗಳು ಆಂಬುಲೆನ್ಸ್ ನ ಸುತ್ತುವರೆದಿದ್ದವು ಬೇರೆ ದಾರಿ ಇಲ್ಲದೇ ರಸ್ತೆಯಲ್ಲಿಯೇ ನಿಂತ ಆಂಬುಲೆಲ್ಸ್ ನಲ್ಲಿದ್ದ ಮಹಿಳೆಗೆ ಹೆರಿಗೆಯಾಗಿದೆ. ತುರ್ತು ಆರೋಗ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಸುಮಾರು 20 ನಿಮಿಷಗಳು ಸಿಂಹಗಳು ಅದೇ ಸ್ಥಳದಲ್ಲಿದ್ದವು ನಂತರ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.