ತೆಕ್ಕಿಲ್ ಪ್ರತಿಷ್ಠಾನದಿಂದ 15ನೇ ವರ್ಷದ ಸೌಹಾರ್ದ ಇಫ್ತಾರ್ ಕಿಟ್ ವಿತರಣೆ

22/05/2020

ಮಡಿಕೇರಿ ಮೇ 22 : ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ 15ನೇ ವರ್ಷದ ರಂಜಾನ್ ಸೌಹಾರ್ದ ಇಫ್ತಾರ್ ಕೂಟವನ್ನು ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಕೊರೋನಾ ಲಾಕ್‍ಡೌನ್ ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಸುಮಾರು 125 ಕುಟುಂಬಗಳಿಗೆ ಯಾವುದೇ ಸಭೆ ಸಮಾರಂಭವನ್ನು ನಡೆಸದೆ ಮನೆ ಮನೆಗಳಿಗೆ ಭೇಟಿ ನೀಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್, ಖತೀಬ್ ಇಸಾಕ್ ಬಾಖವಿ, ಟ್ರಸ್ಟ್‍ನ ಕೋಶಾಧಿಕಾರಿ ಟಿ. ಎಂ ಜಾವೇದ್ ತೆಕ್ಕಿಲ್, ಕಾರ್ಯದರ್ಶಿ ಅಶ್ರಫ್ ಗುಂಡಿ, ತಾಜುದ್ದೀನ್ ಟರ್ಲಿ, ಹಕೀಮ್ ಪೇರಡ್ಕ, ಲತೀಫ್ ಅರಂತೋಡು, ಮೊದಲಾದವರು ಇದ್ದರು.