ಮೊಬಿಕ್ಸ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ 14 ಸಾವಿರ ಮಾಸ್ಕ್ ಗಳ ಹಸ್ತಾಂತರ

22/05/2020

ಮಡಿಕೇರಿ ಮೇ 22 : ಹತ್ತನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಮೊಬಿಕ್ಸ್ ಸಂಸ್ಥೆಯ ಕೊಡಗು ಘಟಕ ವತಿಯಿಂದ 14 ಸಾವಿರ ಮಾಸ್ಕ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಶುಕ್ರವಾರ ನಗರದ ಜಿ.ಪಂ ಸಭಾಂಗಣದಲ್ಲಿ ಸಂಸ್ಥೆಯ ಕೊಡಗು ಘಟಕದ ವ್ಯವಸ್ಥಾಪಕರಾದ ಸಿ.ಬೋಪಣ್ಣ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರು, ಸಂಸದರು, ಡಿಸಿ, ಸಿಇಒ, ಎಸ್‍ಪಿ, ಡಿಡಿಪಿಐ ಇತರರು ಹಾಜರಿದ್ದರು.