ಪೊನ್ನಂಪೇಟೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ನಿಂದ ಜನ ಜಾಗೃತಿ ಕಾರ್ಯಕ್ರಮ
22/05/2020

ಗೋಣಿಕೊಪ್ಪಲು ಮೇ 22. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಪೊನ್ನಂಪೇಟೆ ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೋಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ ಉಗುಳದಂತೆ, ಮಾಸ್ಕ್ ಕಡ್ಡಾಯದ ಬಗ್ಗೆ ಮತ್ತು ಉಲ್ಲಂಘಿಸಿದಲ್ಲಿ ತೆರಬೇಕಾದ ದಂಡದ ಬಗ್ಗೆ ಇದರಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಪೊನ್ನಂಪೇಟೆಯ ಹಿರಿಯ ವರ್ತಕ ಎಸ್ ಎಲ್ ಶಿವಣ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿಜಿಲ್ಲಾ ಚೇಂಬರ್ ನ ಮಾಜಿ ಉಪಾಧ್ಯಕ್ಷ, ಚಾನೆಲ್ ಕೂರ್ಗ್ ಸಂಪಾದಕ ಶ್ರೀಧರ ನೆಲ್ಲಿತ್ತಾಯ , ಜಿಲ್ಲಾ ಚೇಂಬರ್ ನ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಉದ್ಯಮಿ ಚಂದನ್ ಕಾಮತ್ ಉಪಸ್ಥಿತರಿದ್ದರು. ಪೊನ್ನಂಪೇಟೆಯ ಪ್ರಮುಖ ಸ್ಥಳಗಳಲ್ಲಿ ಮತ್ತು ಬಸ್ ನಿಲ್ದಾಣದಲ್ಲಿಮಾಹಿತಿ ಪ್ರಚಾರ ಫಲಕವನ್ನು ಪ್ರಚುರಪಡಿಸಲಾಯಿತು.