ಭಾನುವಾರದ ಬಂದ್ ಸಡಿಲಿಕೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮನವಿ

22/05/2020

ಮಡಿಕೇರಿ ಮೇ 22 : ಭಾನುವಾರ ರಂಜಾನ್ ಹಬ್ಬವಿದ್ದು, ಸರ್ಕಾರ ಅಂದು ಕಪ್ರ್ಯೂ ಘೋಷಿಸಿದೆ. ಅಲ್ಪಸಂಖ್ಯಾತರು ಹಬ್ಬ ಆಚರಿಸಿಕೊಳ್ಳಲು ಜಿಲ್ಲಾಡಳಿತ ಬಂದ್ ಸಡಿಲಿಸಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮನವಿ ಮಾಡಿದರು. ಅಲ್ಪಸಂಖ್ಯಾತರೊಬ್ಬರ ಲಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಅತೀ ಶೀರ್ಘ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಹಾಗು ಅಲ್ಪಸಂಖ್ಯಾತರು ರಂಜಾನ್ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಹೇಳಿದರು.