ಪೊಲೀಸರಿಗೆ ಠಾಣೆಯಲ್ಲೇ ಡ್ಯೂಟಿ

23/05/2020

ಮೈಸೂರು ಮೇ 22 : 55 ವರ್ಷ ಮೇಲ್ಪಟ್ಟ ಪೊಲೀಸರು ಠಾಣೆಯಲ್ಲೇ ಕಾರ್ಯ ನಿರ್ವಹಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.
ಕೊರೊಬಾ ಭೀತಿ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಕ್ರಮವಹಿಸಿದ್ದರೂ ಸಿಬ್ಬಂದಿಗೆ ಸೋಂಕು ತಗುಲುತ್ತಿದೆ. ಹೀಗಾಗಿ ಹೊಸ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ವಯಸ್ಸಾದವರಿಗೆ ಬಹುಬೇಗನೆ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ವೈಜ್ಞಾನಿಕವಾಗಿ ಪಾಳಿಯಲ್ಲಿ ಬದಲಾವಣೆ ಮಾಡಲು ಸೂಚಿಸಲಾಗಿದೆ ಎಂದರು.
ಬಹಳಷ್ಟು ಜನ ಹೊರ ರಾಜ್ಯದಿಂದ ಬರುತ್ತಿದ್ದಾರೆ. ಹೀಗಾಗಿಕ್ವಾರಂಟೈನ್ ವಿಚಾರದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಇನ್ನು, ತಮಿಳುನಾಡು ರಾಜ್ಯದ ಗಡಿಯಲ್ಲಿ ಅಕ್ರಮ ಪ್ರವೇಶ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯ ಮಾರಾಟದ ಸಂದರ್ಭದಲ್ಲಿ ಆ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ಗಡಿಯಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.