ಸಿಐಎಸ್‍ಸಿಇ ಪರೀಕ್ಷೆ ವೇಳಾಪಟ್ಟಿ ಪ್ರಕಟ

23/05/2020

ನವದೆಹಲಿ ಮೇ 22 : ಕೊವಿಡ್-19 ಲಾಕ್ ಡೌನ್ ಪರಿಣಾಮ ಮುಂದೂಡಿಕೆಯಾಗಿದ್ದ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ಸ್ (ಸಿಐಎಸ್‍ಸಿಇ)ನ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಜುಲೈ 1ರಿಂದ ಜುಲೈ 14ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಐಸಿಎಸ್ ಇ ಇಂದು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆಗಳು ಜುಲೈ 2ರಿಂದ 12ರವರೆಗೆ ನಡೆಯಲಿದ್ದು, 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ.
ದೇಶಾದ್ಯಂತ ಇರುವ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ನಡೆಯಲಿವೆ ಎಂದು ಸಿಐಎಸ್‍ಸಿಇ ತಿಳಿಸಿದೆ.