ಹಸಿರು ಬಣ್ಣದ ಲೋಳೆಯ ಮೊಟ್ಟೆ !

23/05/2020

ಮಲಪ್ಪುರಂ ಮೇ 22 : ಕೇರಳದ ಮಲಪ್ಪುರಂನ ಒತ್ತುಕ್ಕುಂಗಲ್ ನಲ್ಲಿರುವ ಕೋಳಿ ಫಾರಂ ನಲ್ಲಿ ಕೋಳಿಯೊಂದು ಇಟ್ಟಿರುವ ಮೊಟ್ಟೆಯೊಳಗೆ ಹಸಿರು ಬಣ್ಣದ ಲೋಳೆ ಕಂಡುಬಂದಿದೆ, ಎಕೆ ಶಹೀಬುದ್ದೀನ್ ಎಂಬುವವರಿಗೆ ಸೇರಿರುವ ಕೋಳಿ ಫಾರಂನಲ್ಲಿ ಇಂತಹ ಘಟನೆ ಕಂಡುಬಂದಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ತಿಳಿದ ಹಲವರು ಶಹೀಬುದ್ದೀನ್ ಅವರಿಗೆ ಕರೆ ಮಾಡಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಕುರಿತು ವಿಚಾರಿಸುತ್ತಿದ್ದಾರೆ.
ಇತ್ತೀಚೆಗೆ ಶಹೀಬುದ್ದೀನ್ ಕೋಳಿಯೊಂದರ ಮೊಟ್ಟೆಯನ್ನು ಬೇಯಿಸಿದ್ದರು. ಆಗ ಮೊಟ್ಟೆಯ ಲೋಳೆ ಹಸಿರು ಬಣ್ಣದಿಂದ ಇತ್ತು. ಇದರಿಂದ ಗಾಬರಿಯಾದ ಅವರ ಕುಟುಂಬ ಅದನ್ನು ತಿನ್ನದೇ ಹಾಗೆಯೇ ಬಿಟ್ಟಿತ್ತು. ಅಚ್ಚರಿ ಎಂದರೆ ಈ ಹಸಿರು ಬಣ್ಣದ ಲೋಳೆಯ ಮೊಟ್ಟೆ ಇಟ್ಟಿದ್ದ ಕೊಳಿಯ ಇತರೆ ಮೊಟ್ಟೆಗಳಿಂದ ಮರಿಗಳು ದೊಡ್ಡದಾಗಿ ಅವುಗಳೂ ಕೂಡ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳನ್ನು ಇಡುತ್ತಿವೆ. ಈ ಘಟನೆ ಬಳಿಕ ಶಹೀಬುದ್ದೀನ್ ಕುಟುಂಬ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳನ್ನು ನಿರಾಂತಕವಾಗಿ ತಿನ್ನ ತೊಡಗಿದ್ದಾರೆ. ಈ ವರೆಗೂ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲವಂತೆ. ಅಲ್ಲದೆ ಹಸಿರು ಲೋಳೆಯ ಮೊಟ್ಟೆ ಕೂಡ ಹಳದಿ ಬಣ್ಣದ ಲೋಳೆಯ ಮೊಟ್ಟೆಯನ್ನೇ ಹೋಲುತ್ತಿದೆ. ರುಚಿಯಲ್ಲೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.